Untitled Document
Sign Up | Login    
Dynamic website and Portals
  

Related News

ಮೇಕ್ ಇನ್ ಇಂಡಿಯಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಭಾರಿ ಬೆಂಕಿ

ಮುಂಬಯಿನಲ್ಲಿ ಭಾನುವಾರ ಸಂಜೆ ನಡೆಯುತ್ತಿದ್ದ ಮೇಕ್ ಇನ್ ಇಂಡಿಯಾ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಭಾರೀ ಬೆಂಕಿ ಭುಗಿಲೆದ್ದಿತು. ಬೆಂಕಿ ತೀವ್ರ ಸ್ವರೂಪದ್ದಾಗಿದ್ದು, ಸಂಪೂರ್ಣ ವೇದಿಕೆ ಬೆಂಕಿಗೆ ಆಹುತಿಯಾಗಿದೆ. ಆದರೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ...

ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ಃ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ

2002ರ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಬುಧವಾರ ...

ಮಹಾರಾಷ್ಟ್ರದಲ್ಲಿ 5ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಫಾಕ್ಸ್ ಕಾನ್ ಒಪ್ಪಂದ

ಪ್ರಧಾನಿ ನರೇಂದ್ರ ಮೋದಿಯವರ ಕನಸಾದ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಿಂದ ಭಾರತಕ್ಕೆ ಈಗಾಗಲೇ 20 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತದ ವಿದೇಶಿ ಬಂಡವಾಳ ಹೂಡಿಕೆಯ...

ರಾಹುಲ್ ಗಾಂಧಿಯ ಕಿಸಾನ್ ಪಾದಯಾತ್ರೆ ವಿರುದ್ಧ ಶಿವಸೇನೆ ವಾಗ್ದಾಳಿ

'ಕಿಸಾನ್ ಪಾದಯಾತ್ರೆ' ಹಮ್ಮಿಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಅಧಿಕಾರ ಕಳೆದುಕೊಂಡ ನಂತರ ರೈತರ ಪರ ಪಾದಯಾತ್ರೆ ನಡೆಸುವ ಬದಲು ಅಧಿಕಾರದಲ್ಲಿರಬೇಕಾದರೆ, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು ಎಂದು ರಾಹುಲ್ ಗಾಂಧಿಗೆ ಶಿವಸೇನೆ ಹೇಳಿದೆ. ಇದೇ ವೇಳೆ...

ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದು: ಮಹಾ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

'ಮಹಾರಾಷ್ಟ್ರ'ದಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದುಗೊಳಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರಿ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತಿದ್ದ ಶೇ.5ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಮುಸ್ಲಿಮ್ ಮೀಸಲಾತಿ ರದ್ದುಗೊಳಿಸಿರುವುದರ...

ಎಚ್‌1ಎನ್‌1 ರೋಗಿಗಳಿಗೆ ಮಹಾರಾಷ್ಟ್ರದಲ್ಲಿ ಉಚಿತ ಚಿಕಿತ್ಸೆ

ಎಚ್‌1ಎನ್‌1 ಹಂದಿ ಜ್ವರ ರೋಗಿಗಳಿಗೆ ಸರಕಾರದ ಖರ್ಚಿನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಈ ನಡುವೆ ಮುಂಬಯಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಎಚ್‌1ಎನ್‌1 ಹಂದಿ ಜ್ವರವು ಇನ್ನಷ್ಟು ಹೆಚ್ಚುವ ಭೀತಿ ಮೂಡಿಸಿದೆ. ರಾಜ್ಯಾದ್ಯಂತದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ...

ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ: ಹಂತಕರಿಗೆ 5 ವರ್ಷ ಜೈಲು

ಪರ-ವಿರೋಧದ ನಡುವೆಯೂ ಮಹಾರಾಷ್ಟ್ರ ಸರ್ಕಾರ ಕೊನೆಗೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಗೋಹತ್ಯೆ ಮಾಡುವವರು 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಮಹಾರಾಷ್ಟ್ರ ಜಾನುವಾರು ಸಂರಕ್ಷಣಾ ಕಾಯ್ದೆಯಡಿ ಈ ನಿಷೇಧವನ್ನು ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಇನ್ನು ಮುಂದೆ ಅಕ್ರಮವಾಗಿ ಜಾನುವಾರು...

ಮಹಾ ನೂತನ ಸರ್ಕಾರದಿಂದ ಏನು ಬದಲಾವಣೆಯಾಗಿದೆ ತಿಳಿಸಿ: ಶಿವಸೇನೆ

ಮಹಾರಾಷ್ಟ್ರದ ನೂತನ ಸರ್ಕಾರದಿಂದ ಏನು ಬದಲಾವಣೆಯಾಗಿದೆ? ಈ ಬಗ್ಗೆ ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ ಎಂದು ಎನ್ ಡಿಎ ಮೈತ್ರಿಕೂಟದ ಶಿವಸೇನೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತನ್ನದೇ ಮೈತ್ರಿಕೂಟದ ಫಡ್ನವೀಸ್...

ಶಿವಸೇನೆ ಬಿಜೆಪಿ ಸರ್ಕಾರ ಸೇರಿರುವುದನ್ನು ವಿರೋಧಿಸಿ ಪಿಐಎಲ್

'ಮಹಾರಾಷ್ಟ್ರ'ದಲ್ಲಿ ಬಿಜೆಪಿ ಸರ್ಕಾರದೊಂದಿಗೆ ಶಿವಸೇನೆ ಸೇರ್ಪಡೆಗೊಂಡ ಬೆನ್ನಲ್ಲೇ, ಈ ಬೆಳವಣಿಗೆಯನ್ನು ವಿರೋಧಿಸಿ ಮುಂಬೈ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಪಮತದ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಸಂದರ್ಭದಲ್ಲಿ ಶಿವಸೇನೆ ಸರ್ಕಾರದ ವಿರುದ್ಧ ಮತ ಚಲಾಯಿಸಿತ್ತು....

ಬಿಸ್ನೆಸ್ ಕ್ಲಾಸ್ ಏರ್ ಟಿಕೆಟ್ ನಲ್ಲಿ ದುಬೈಗೆ ಹಾರಿದ ಆಮ್ ಆದ್ಮಿ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಯಾವುದೇ ಅಧಿಕಾರ ಹೊಂದದೇ ದೆಹಲಿಯಿಂದ ದುಬೈಗೆ ತೆರಳುವ ವಿಮಾನದಲ್ಲಿ ಬಿಸ್ನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿ ಆಮ್ ಆದ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ರಕ್ಷಣಾ ಸಚಿವ ಮನೋಹರ್...

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್ 5ರಂದು ನಡೆಯಲಿದೆ. ಬಿಜೆಪಿ ಹಾಗೂ ಶಿವಸೇನೆ ನಡುವೆ ಇದ್ದ ಬಿಕ್ಕಟ್ಟು ಬಗೆಹರಿದ ಬೆನ್ನಲ್ಲೇ ಫಡ್ನವೀಸ್ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಸಮಾರಂಭವು ಮಹಾರಾಷ್ಟ್ರದ ರಾಜಭವನದಲ್ಲಿ ಸಂಜೆ 4 ಗಂಟೆಗೆ...

ಮಹಾ ಮರು ಮೈತ್ರಿ: ಶಿವಸೇನೆಯ 12 ಶಾಸಕರಿಗೆ ಫಡ್ನವೀಸ್ ಸಂಪುಟದಲ್ಲಿ ಸ್ಥಾನ

'ಮಹಾರಾಷ್ಟ್ರ' ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಪುಟಕ್ಕೆ ಶಿವಸೇನೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು 12 ಶಿವಸೇನೆ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಿವಸೇನೆ ಬಿಜೆಪಿ ಸಚಿವ ಸಂಪುಟ ಸೇರುವುದರ ಬಗ್ಗೆ ಡಿ.1ರಂದು ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನೆ ಮುಖಂಡ...

ಬಿಜೆಪಿ ಸರ್ಕಾರ ಸೇರುವುದಕ್ಕೆ ಶಿವಸೇನೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ

'ಮಹಾರಾಷ್ಟ್ರ' ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಶಿವಸೇನೆಯೊಂದಿಗಿನ ಮಾತುಕತೆ ಮುಕ್ತಾಯಗೊಂಡಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಡಿ.1ರಂದು ಮುಂಬೈನಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹಾಗೂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಅಧಿಕಾರ ಹಂಚಿಕೆ ಸಂಬಂಧ...

ಶಿವಸೇನೆ ಮನವೊಲಿಕೆಗೆ ಮುಂದಾದ ಬಿಜೆಪಿ ನಾಯಕರು

'ದೇವೇಂದ್ರ ಫಡ್ನವೀಸ್' ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶಿವಸೇನೆಯನ್ನು ಸೇರಿಸಿಕೊಳ್ಳುವ ಸಂಬಂಧ ಬಿಜೆಪಿ ನಾಯಕರು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ನಾಯಕರಾದ ದೇವೇಂದ್ರ ಪ್ರಧಾನ್, ಚಂದ್ರಕಾಂತ್ ಪಾಟೀಲ್ ಅವರು ಶಿವಸೇನೆ ಯೊಂದಿಗೆ ಮಾತುಕತೆ ನಡೆಸಿ ದೇವೇಂದ್ರ ಫಡ್ನವೀಸ್ ಸರ್ಕಾರವನ್ನು...

ವಿಶ್ವಾಸ ಮತದಲ್ಲಿ ಬಿಜೆಪಿಗೆ ಎನ್.ಸಿ.ಪಿ ಬೆಂಬಲ: ಪಕ್ಷದ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

'ಮಹಾರಾಷ್ಟ್ರ'ದಲ್ಲಿ, ದೇವೇಂದ್ರ ಫಡ್ನವೀಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಾಸ ಮತ ಸಾಬೀತು ಪಡಿಸಿರುವ ಬಗ್ಗೆ ಉದ್ಭವಿಸಿರುವ ಅಸಮಾಧಾನ ಮುಂದುವರೆದಿದ್ದು, ಬಿಜೆಪಿಯ ಕೆಲ ಮುಖಂಡರು ಪಕ್ಷದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಶ್ವಾಸ ಮತ ಸಾಬೀತು ಸಂದರ್ಭದಲ್ಲಿ ಭ್ರಷ್ಟಚಾರದಲ್ಲೇ ಮುಳುಗಿದ್ದ...

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಅಗ್ನಿಪರೀಕ್ಷೆ

ಕೆಲ ದಿನಗಳ ಹಿಂದೆ ದೇವೇಂದ್ರ ಫ‌ಡ್ನವೀಸ್‌ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ನ.12 ಅಗ್ನಿಪರೀಕ್ಷೆ ನಡೆಯಲಿದೆ. ಮುಖ್ಯಮಂತ್ರಿ ಫಡ್ನವೀಸ್ ವಿಶ್ವಾಸಮತ ಯಾಚಿಸಬೇಕಿದೆ. ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದ್ದು, ನಾವು ವಿಪಕ್ಷ ಸ್ಥಾನದಲ್ಲಿ ಆಸೀನರಾಗುವುದಾಗಿ ಶಿವಸೇನೆ ಮುಖ್ಯಸ್ಥ...

ವಿಶ್ವಾಸಮತ ಸಾಬೀತು ಪಡಿಸಿದ ಸಿಎಂ ಫಡ್ನವೀಸ್

ಮಹಾರಾಷ್ಟ್ರದಲ್ಲಿ ಅಲ್ಪಮತದ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ವಿಶ್ವಾಸಮತ ಸಾಬಿತು ಪಡಿಸುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಧ್ವನಿಮತದ ಮೂಲಕ ಬಹುಮತ ಸಾಬೀತುಪಡಿಸಿದ್ದಾರೆ. ಈ ಮೂಲಕ ಶಿವಸೇನೆಗೆ ಭಾರೀ ಮುಖಭಂಗವಾದಂತಾಗಿದೆ. ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ...

ಮಹಾ ಸಿ.ಎಂ ದೇವೇಂದ್ರ ಫಡ್ನವೀಸ್ ಗೆ ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿಲ್ಲ: ಕಾಂಗ್ರೆಸ್

'ಮಹಾರಾಷ್ಟ್ರ' ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸ್ವಂತ ನಿರ್ಧಾರ ಕೈಗೊಂಡು ಸರ್ಕಾರ ನಡೆಸಲು ಸಾಧ್ಯವಾಗುವುದಿಲ್ಲ, ಅವರೂ ಕಾಂಗ್ರೆಸ್ ನಾಯಕರಂತೆಯೇ ಹೈಕಮಾಂಡ್ ಒತ್ತಡಕ್ಕೊಳಗಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ನಾರಾಯಣ್ ರಾಣೆ ಹೇಳಿದ್ದಾರೆ. ಆಡಾಳಿತದಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೂ ಸ್ವಂತ ನಿರ್ಧಾರ...

ಜನರನ್ನು ಲಘುವಾಗಿ ಪರಿಗಣಿಸಬೇಡಿ: 'ಮಹಾ'ಬಿಜೆಪಿ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಮತ್ತೆ ಬಿಕ್ಕಟ್ಟು ಉಂಟಾಗಿದೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ಗೆ ಶಿವಸೇನೆ ಎಚ್ಚರಿಕೆ ನೀಡಿದ್ದು ರಾಜ್ಯದ ಜನತೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಹೇಳಿದೆ. ಸಾಮ್ನಾ ಸಂಪಾದಕೀಯದ ಮೂಲಕ ಬಿಜೆಪಿ...

ಮಹಾರಾಷ್ಟ್ರದ ಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪದಗ್ರಹಣ

'ಮಹಾರಾಷ್ಟ್ರ'ದ 27ನೇ ಹಾಗೂ ಬಿಜೆಪಿಯ ಪ್ರಥಮ ಮುಖ್ಯಮಂತ್ರಿಯಾಗಿ ದೇವೇಂದ್ರ ಗಂಗಾಧರ್ ರಾವ್ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅ.31ರಂದು ಮುಂಬೈನ ಪ್ರಸಿದ್ಧ ವಾಂಖೆಡೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಭವ್ಯ ಕಾರ್ಯಕ್ರಮದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ....

ಮಹಾ ಸಿ.ಎಂ ರೇಸ್ ನಲ್ಲಿ ಇನ್ನೂ ಚಾಲ್ತಿಯಲ್ಲಿರುವ ಫಡ್ನವೀಸ್ ಹೆಸರು

'ಮಹಾರಾಷ್ಟ್ರ'ದಲ್ಲಿ ಸರ್ಕಾರ ರಚನೆ ಬಗ್ಗೆ ಶಿವಸೇನೆ ಹಾಗೂ ಬಿಜೆಪಿಯೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಆರಂಭವಾಗುವ ಸೂಚನೆ ದೊರೆತಿದೆ. ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಯುತ್ತಿರುವ ಜೊತೆಜೊತೆಗೇ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಪ್ರಾರಂಭವಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾದರೂ ಸಿ.ಎಂ ಹುದ್ದೆ ರೇಸ್ ನಲ್ಲಿ...

ನಿತಿನ್ ಗಡ್ಕರಿ ಸಿ.ಎಂ ಆಗದಿದ್ದರೆ ರಾಜೀನಾಮೆ ನೀಡುವೆ-ಮಹಾ ಬಿಜೆಪಿ ಶಾಸಕನ ಬೆದರಿಕೆ

'ಮಹಾರಾಷ್ಟ್ರ' ಮುಖ್ಯಮಂತ್ರಿಯಾಗುವಂತೆ ನಿತಿನ್ ಗಡ್ಕರಿ ಅವರಿಗೆ ಬಿಜೆಪಿ ಶಾಸಕರಿಂದ ಒತ್ತಡ ಹೆಚ್ಚಾಗುತ್ತಿದೆ. ದೇವೇಂದ್ರ ಫಡ್ನವೀಸ್ ಹೆಸರು ಮುಂಚೂಣಿಯಲ್ಲಿರುವುದರಿಂದ ಶಾಸಕರು ನಿತಿನ್ ಗಡ್ಕರಿ ಅವರನ್ನು ಸಿ.ಎಂ ಆಗುವಂತೆ ಒತ್ತಾಯಿಸುತ್ತಿದ್ದಾರೆ. ನಾಗ್ಪುರದ ಈಶಾನ್ಯ ವಲಯದ ಶಾಸಕ ಕೃಷ್ಣ ಖೋಪ್ಡೆ, ನಿತಿನ್ ಗಡ್ಕರಿ ಅವರೇ ಮಹಾರಾಷ್ಟ್ರದ...

ದೇವೇಂದ್ರ ಫಡ್ನವೀಸ್ ಮುಂದಿನ 'ಮಹಾ' ಸಿ.ಎಂ?

'ಮಹಾರಾಷ್ಟ್ರ' ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಇನ್ನು 24ಗಂಟೆಗಳಷ್ಟೇ ಬಾಕಿ ಇದೆ. ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭೆಯತ್ತ ಎಲ್ಲರ ಗಮನ ನೆಟ್ಟಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುಮತ ಪಡೆದು ಸರ್ಕಾರ ರಚಿಸಲು ಅರ್ಹತೆ ಪಡೆಯುವ ಏಕೈಕ ಪಕ್ಷವಾಗಿ ಬಿಜೆಪಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited